Friday, June 8, 2018

ಶಿಶುಪದ್ಯ - ೧

ನನ್ನೆದೆಯ ಗೂಡಿನೊಳು ಪ್ರೇಮದೀಪವ ಹಚ್ಚಿ
ಮುಗ್ಧತೆಯ ನಗುವಿನಲಿ ಜಗವ ಮರೆಸಿರುವೆ।
ನನ್ನ ಬಾಳಿನ ಗುಡಿಗೆ ನೀನೆ ದೇವರು ಕಂದ
ನಿನ್ನ ನೋಡಿದ ಕ್ಷಣವೆ ಮನದಿ ಶಿವಪೂಜೆ।।