ಮೊದಲ ಬಾರಿಗೆ ಹಲ್ಲು ಬಂದಿರುವ ಕಂದನಾ
ವದನವದು ಹೊಳೆಯುವುದು ಬಾಲಶಶಿಯಂತೆ |
ತೊದಲ ನುಡಿಯಲಿ ಕಂಡ ಏಕದಂತನ ದಂತ
ಮುದವಾದ ಹಿಮಲಿಂಗ - ಡೊಂಕುಡುಮ್ಮ || ೨ ||
ಮೊದಲ ಬಾರಿಗೆ ಹಲ್ಲು ಬಂದಿರುವ ಕಂದನಾ
ವದನವದು ಹೊಳೆಯುವುದು ಬಾಲಶಶಿಯಂತೆ |
ತೊದಲ ನುಡಿಯಲಿ ಕಂಡ ಏಕದಂತನ ದಂತ
ಮುದವಾದ ಹಿಮಲಿಂಗ - ಡೊಂಕುಡುಮ್ಮ || ೨ ||
ಈಶ್ವರನ ಸಂಕಲ್ಪ ಜಗದ ಸುಖದುಃಖಗಳು
ನಶ್ವರವು ಲೋಕಭೋಗದ ವಿಲಾಸಗಳು |
ಶಾಶ್ವತವು ಪ್ರೀತಿವಿಶ್ವಾಸಗಳ ಜೀವನವು
ವಿಶ್ವಮೈತ್ರಿಯೆ ಧರ್ಮ - ಡೊಂಕುಡುಮ್ಮ || ೧ ||
ಇದು ಮನಸ್ಸಿನ ಸ್ವಭಾವ. ಮನಸ್ಸು ತಾನು ಪಟ್ಟ ದೊಡ್ಡ ದೊಡ್ಡ ಅನುಭವಗಳನ್ನು ತನ್ನಲ್ಲಿಯೇ ಅಣಗಿಸಿಕೊಂಡು ಸುಮ್ಮನಿರಲಾರದು. ಅದು ಬಾಯಿ ಬಿಟ್ಟು ತನ್ನ ಸುಖ ದುಃಖಗಳನ್ನು ಹೇಳಿಕೊಳ್ಳಬೇಕು. ತನ್ನ ದೈವದಲ್ಲಿ ಅದು ಹೇಳಿಕೊಳ್ಳುವ ಗೋಳೂ ಚಿಂತೆಯೂ ಸುಖಪ್ರಾಯವಾದುವೇ. ಏಕೆಂದರೆ ಅದು ದೈವವನ್ನು ಕುರಿತು ಹೇಳಿದ್ದು, ತಾನು ನಂಬಿದ್ದ ದೈವವನ್ನುದ್ದೇಶಿಸಿದ್ದು. ಆದದ್ದರಿಂದ ಅದು ತನ್ನ ಭಯ ಸಂತಾಪಗಳನ್ನು ನೀಗಿ ನೆಮ್ಮದಿ ತರುವಂಥಾದ್ದು. ಹೀಗೆ ಅಂತರಂಗದ ನೆಚ್ಚಿಕೆಯನ್ನೂ ಭರವಸೆಯನ್ನೂ ಸಂತೋಷವನ್ನೂ ಕೃತಜ್ಞತೆಯನ್ನೂ ಹೇಳಿಕೊಳ್ಳುವ ನುಡಿ ಕೀರ್ತನೆ.