Tuesday, June 28, 2016

ಕನ್ನಡ ಪದ್ಯ: ೧

ವಸ್ತು: ಸೂರ್ಯಗ್ರಹಣ
ಛಂದಸ್ಸು: ಪಂಚಮಾತ್ರಾ ಚೌಪದಿ

ರಾಜಸೂರ್ಯನು ಭೂಮಿರೂಪಕ್ಕೆ ಮರುಳಾಗಿ 
ಸೋಜಿಗದ ನಗೆಯೊಳಿಂ ಕೆಂಪಾದನು | 
ನೈಜವಾದೊಲುಮೆಯಿಂ ಗ್ರಹಣಕಾಲದೊಳಿಳೆಗೆ 
ರಂಜಕದ ಚಿನ್ನದುಂಗುರವಿತ್ತನು || 

No comments:

Post a Comment