Friday, December 29, 2017

ನಾನು ಓದಿದ ಪುಸ್ತಕಗಳು

ಲೇಖಕರು: ಎಸ್ ಎಲ್ ಭೈರಪ್ಪ

  1. ಮತದಾನ
  2. ನಾಯಿ ನೆರಳು
  3. ಕಾವಲು
  4. ಉತ್ತರ ಕಾಂಡ
  5. ತಬ್ಬಲಿಯು ನೀನಾದೆ ಮಗನೆ
  6. ನಿರಾಕರಣ
  7. ಆವರಣ
  8. ಗೃಹಭಂಗ
  9. ದಾಟು
--------------------------------------------------------------------------------------------------------------------------
Author: APJ Kalam
  1. Guiding Souls

--------------------------------------------------------------------------------------------------------------------------
ಲೇಖಕರು: ಶತಾವಧಾನಿ ಡಾ ಆರ್ ಗಣೇಶ್

  1. ಸರ್ವತಂತ್ರ ಸ್ವತಂತ್ರ
  2. ವಾಣೀವಾಹನ

Saturday, June 10, 2017

ಬೆಪ್ಪುಬೊಮ್ಮ - ಪದ್ಯ: ೧

ಕೊಚ್ಚೆನೀರನೆ ನೆಕ್ಕಿ ಹೊಟ್ಟೆಯನು ತಣಿಸುತಿದೆ
ಉಚ್ಚನೀಚಗಳ ಪರಿವಿರದ ನಾಯಿ|
ಸ್ವಚ್ಛವೋ ಮಲಿನವೋ ಜೀವಪೋಷಕವಾಗೆ
ತುಚ್ಛವಾವುದೊ ಜಗದಿ - ಬೆಪ್ಪುಬೊಮ್ಮ||

Tuesday, May 9, 2017

ಕನ್ನಡ ಪದ್ಯ: ೬



ಚಿತ್ರಕ್ಕೆ ಪದ್ಯ:-
ಎಷ್ಟು ಚಂದ ನಿನ್ನ ಮೊಗವು
ನೋಡಲೆರಡು ಕಣ್ಣು ಸಾಲದು|
ನೋಡಿದಷ್ಟು ಮತ್ತೆ ನೋಡೊ
ಸುಂದರಾಂಗ ಮುದ್ದುಕಂದನೇ||
ಓಡಿ ಬಾರೊ ನಮ್ಮ ಮನೆಗೆ
ಬೆಣ್ಣೆ ತಿಂಡಿ ಸಿಹಿಯ ತಿನಿಸುವೆ|
ನಿನ್ನ ಕೆಂಪು ತುಟಿಯು ತಾಕೆ
ಆಯ್ತು ನನ್ನ ಹಣೆಗೆ ಕುಂಕುಮ||
ಹಾಲುಗೆನ್ನೆ ಚೆಲುವ ನೀನು
ಗಲ್ಲ ಹಿಂಡಿ ಮುತ್ತು ಕೊಡುವೆನು|
ಬೇರೆ ಎಲ್ಲು ಹೋಗಬೇಡ
ನನ್ನ ಜೊತೆಯೆ ಇಲ್ಲೆ ವಾಸಿಸು||
ನಿನ್ನ ನೆನಪೆ ನನ್ನ ಮರೆವು
ಒಂದು ಚಣವು ಬಿಡಲು ಕಷ್ಟವೋ|
ನಿತ್ಯ ಕಸವ ಗುಡಿಸಿ ಕರೆವೆ
ಬಂದು ನೆಲೆಸು ಎನ್ನ ಹೃದಯದಿ||
ನಿನ್ನ ಬಣ್ಣ ತಿಳಿಯದೆನಗೆ
ಬಿಳಿಯೊ ಕಪ್ಪೊ ನೀಲವರ್ಣವೋ|
ಏನೆ ಇರಲಿ ನನ್ನ ಮನದ
ಕಪ್ಪು ತೊಳೆದು ಬೆಳಕು ಬೀರು ನೀ||
ಬಟ್ಟೆ ಹಾಸಿ ತೊಟ್ಟಿಲನ್ನು
ತೂಗುತಿರುವೆ ಬಾರೊ ಕೃಷ್ಣನೇ|
ನನಗೆ ನೀನು ನಿನಗೆ ನಾನು
ಮಗುವೆಯಲ್ತೆ ಜಗದ ಮಡಿಲಲಿ||
ನನ್ನ ಕೊಳಲು ಮಾಡಿ ನುಡಿಸು
ನವಿಲು ಗರಿಯ ಜನ್ಮ ಕರುಣಿಸು|
ನಿನ್ನ ಸಂಗ ಬಿಡದೆಯಿರಲು
ಯಾವುದಾದರೇನು ಹಿತವದು||

Monday, May 8, 2017

ಕನ್ನಡ ಪದ್ಯ: ೫





ಚಿತ್ರಕ್ಕೆ ಪದ್ಯ:-

ತೆಂಗಿನ ಗರಿಯನೆ ಉದ್ಧರಣೆಯವೋಲ್
ಆಚಮನಕೆ ರವಿ ಬಳಸಿದನೋ|
ಕಡಲಿಗೆ ಕಿರಣದ ಅರ್ಘ್ಯವ ನೀಡುತ
ಸಂಜೆಯ ಸಂಧ್ಯೆಗೆ ವಂದಿಸಿದ||

Thursday, April 13, 2017

ಕನ್ನಡ ಪದಕೋಶ


  1. ಹಂದರ = ಚಪ್ಪರ (Pendal)
  2. ಒಪ್ಪುಡುಗೆ = Uniform Dress

Monday, March 13, 2017

ಕನ್ನಡ ಪದ್ಯ: ೪

ವಸ್ತು: ಅಂಧ ಅಣ್ಣ ತಂಗಿಯ ಹೋಳಿ
ಛಂದಸ್ಸು: ಪಂಚಮಾತ್ರಾ ಚೌಪದಿ

ಕಣ್ಣಿರದ ಸೋದರಗೆ ಸೋದರಿಯು ಬಗೆದುಂಬಿ
ಬಣ್ಣವನು ಹಚ್ಚುತ್ತ ಮೊಗವ ತುಂಬಿದಳು|
ಕೆನ್ನೆಗಳ ಮಿಡಿತದಲಿ ಭಾವಗಳ ರಂಗಿನೊಳು
ಅಣ್ಣನಾಡಿದ ಹೋಳಿ ತಂಗಿಯೊಲುಮೆಯಲಿ||


ಕನ್ನಡ ಪದ್ಯ: ೩

ವಸ್ತು: ಚಂದ್ರನ ಹೋಳಿ
ಛಂದಸ್ಸು: ಪಂಚಮಾತ್ರಾ ಚೌಪದಿ

ಬೆಳ್ಳಿಯುಡುಪಿನ ಉಡುಪ ಕಂದುಮಚ್ಚೆಯ ಮೊಗದಿ
ಬುವಿಯ ಜೊತೆ ಹೋಳಿಯಾಡುತಿಹನಿಂದು|
ಬೆಳದಿಂಗಳಿನ ಬಣ್ಣವನು ಕಿರಣಗೊಳವೆಯಲಿ
ತುಂಬಿ ತಿರೆಗೆರಚುತ್ತ ಕಂಗೊಳಿಸುತಿಹನು||